ಭಟ್ಕಳ, ಫೆಬ್ರವರಿ ೧೧, ಭಟ್ಕಳ ಸಮುದ್ರ ಕಿನಾರೆಯಿಂದ ಸುಮಾರು ೨೨ ನಾಟಿಕಲ್ ಮೈಲು ದೂರದಲ್ಲಿರುವ ಜೀವ ವೈವಿದ್ಯತಾಣವಾದ ನೇತ್ರಾಣಿ ಗುಡ್ಡಕ್ಕೆ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಬುಧವಾರದಂದು ಭೇಟಿ ನೀಡಿ ಅಲ್ಲಿನ ಸುಂದರ ಪರಿಸರಕ್ಕೆ ಮಾರುಹೋದರು.
ಮುರುಡೇಶ್ವರದಿಂದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನೇತ್ರಣಿಗೆ ತೆರಳಿದ ಅವರು ಅಲ್ಲಿನ ಪಕ್ಷಿಸಂಕುಲ. ಜೀವ ವೈವಿದ್ಯತೆ, ಸುಂದರ ಪರಿಸರ, ಮರಗಿಡ, ಸಮುದ್ರದಂಚಿನ ಕಲ್ಲುಗಳ ಮೇಲೆ ಹವಳದಾಕರದಲ್ಲಿ ಬೆಳೆಯುತ್ತಿರುವ ಚಿಪ್ಪುಗಳನ್ನು ಅಲ್ಲಿ ಪ್ರಕೃತಿ ಸಂದೌರ್ಯವನ್ನು ಕಂಡು ಮಾರು ಹೋದರು. ಅಲ್ಲಿನ ಸರ್ವಧರ್ಮದವರ ಧಾರ್ಮಿಕ ಚಿನ್ಹೆಗಳನ್ನು ಕಂಡು ಸೌಂದರ್ಯವು ಇಲ್ಲಿ ಸರ್ವಧರ್ಮಿಯರನ್ನು ಒಂದು ಗೂಡಿಸಿದೆ ಇದೊಂದು ಸೌಹಾರ್ಧತೆಯ ಸಂಗಮವಾಗಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು. ಪ್ರಕೃತಿಯ ಸೌಂದರ್ಯವರಾಶಿಯನ್ನೆ ತನ ಒಡಲಲ್ಲಿ ಹುದುಗಿಸಿಕೊಂಡಿರುವ ಇಂತಹ ಗುಡ್ಡವನ್ನು ರಕ್ಷಿಸುವ ಕೆಲಸ ಆಗಬೇಕಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮುದ್ರ ನಡುಗಡ್ಡೆಯ ಪ್ರದೇಶವಾದ ನೇತ್ರಾಣಿ ಗುಡ್ಡವನ್ನು ಸರಕಾರವು ಜೀವ ವೈವಿದ್ಯಮಯ ತಾಣವೆಂದು ಘೋಷಿಸಿದೆ ನೈಸರ್ಗಿಕ ಸಂಪತ್ತಿನ ಆಗರನ್ನೆ ಇದು ತನ್ನೊಳಗೆ ಇಟ್ಟುಕೊಂಡಿದ್ದು ಮೀನುಗಾರರು ಈ ಗುಡ್ಡದ ಬಗ್ಗೆ ವಿಶೇಷ ನಂಬಿಯನ್ನು ಇಟ್ಟಿಕೊಂಡಿದ್ದು ಇದನ್ನು ರಕ್ಷಿಸುವ ಕಾರ್ಯ ಆಗಬೆಕಿದೆ ಎಂದರು. ಹಲವಾರು ವೈವಿದ್ಯತೆಗಳಿಂದ ಕೂಡಿದ ಈ ನೈಸರ್ಗಿಕ ತಾಣ ಸಮರಾಭ್ಯಾಸದಿಂದಾಗಿ ಅನೇಕಾ ರೀತಿಯ ತೊಂದರೆಗಳಲ್ಲಿ ಸಿಲುಕಿಕೊಂಡಿದೆ ಮುಂದಿನ ದಿನಗಳಲ್ಲಿ ಹೀಗಾಗದಂತೆ ಸರ್ಕಾರದ ಮೇಲೆ ಒತ್ತಡವನ್ನು ತರಲಾಗುವುದು ಎಂದರು. ಈ ಸಂದರ್ಭದಲ್ಲಿ ಹೊನ್ನಾವರ ಡಿ.ಎಫ್.ಓ ಉದುಪುಡಿ ಹಾಗೂ ಭಟ್ಕಳದ ವಲಯ ಅರಣ್ಯಾಧಿಕಾರಿ ಎಸ್.ಸಿ. ತಾಂಡೇಲ್ ಉಪಸ್ಥಿತರಿದ್ದರು.